ಜಪಾನ್ ಏಶ್ಯಾ ಖಂಡದ ಒಂದು ದ್ವೀಪ ದೇಶ. ಇದು ಪೆಸಿಫಿಕ್ ಮಹಾಸಾಗರದ ಸುಮಾರು ೩೦೦೦ ನಡುಗಡ್ಡೆಗಳ ಸಮೂಹ. ೪ ಪ್ರಮುಖ ದ್ವೀಪಗಳೆಂದರೆ ಹೊಂಶು, ಹೊಕ್ಕಾಇದೊ, ಶಿಕೊಕು ಮತ್ತು ಕ್ಯೂಶು. ಜಪಾನ್ ಜಗತ್ತಿನ ೧೦ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ. ಇದರ ರಾಜಧಾನಿ ತೋಕ್ಯೋ ಮಹಾನಗ…ಜಪಾನ್ ಏಶ್ಯಾ ಖಂಡದ ಒಂದು ದ್ವೀಪ ದೇಶ. ಇದು ಪೆಸಿಫಿಕ್ ಮಹಾಸಾಗರದ ಸುಮಾರು ೩೦೦೦ ನಡುಗಡ್ಡೆಗಳ ಸಮೂಹ. ೪ ಪ್ರಮುಖ ದ್ವೀಪಗಳೆಂದರೆ ಹೊಂಶು, ಹೊಕ್ಕಾಇದೊ, ಶಿಕೊಕು ಮತ್ತು ಕ್ಯೂಶು. ಜಪಾನ್ ಜಗತ್ತಿನ ೧೦ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ. ಇದರ ರಾಜಧಾನಿ ತೋಕ್ಯೋ ಮಹಾನಗರ, ಹಾಗೂ ಇದರ ಇತರ ಪ್ರಮುಖ ನಗರಗಳು ಯೊಕೊಹಾಮಾ, ಓಸಾಕಾ, ಕ್ಯೋತೊ ಮತ್ತು ನಾಗೋಯಾ ಆಗಿವೆ. ಇದು ವಿಶ್ವದ ೨ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ದೇಶ. ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ಈ ದೇಶ ವಿಶ್ವದ ಪ್ರಮುಖ ದೇಶಗಳಲ್ಲೊಂದು.